Daily Current affairs 21st August

21ST AUGUST

1.ಉನ್ನತ ಶಿಕ್ಷಣಕ್ಕಾಗಿ  ಏಜೆನ್ಸಿ ಮೂಲಕ ಹಣಕಾಸಿನ ನೆರವು .

ವಿದ್ಯಾರ್ಥಿಗಳ ಗಮನಕ್ಕೆ

Mains Paper 2: Governance | Issues relating to development and management of Social Sector/Services relating to Health, Education, Human Resources.

Prelims level  (ಪ್ರಿಲಿಮ್ಸ್ ಗಾಗಿ) : ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (HEFA),ಬಗ್ಗೆ 

Mains level    (ಮೇನ್ಸ್ ಗಾಗಿ)  : ಭಾರತದಲ್ಲಿನ  ಉನ್ನತ ಶಿಕ್ಷಣದ ಬಗ್ಗೆ

ಪ್ರಮುಖ ಅಂಶಗಳು

  • ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ) ಹಾಗೂ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳಲ್ಲಿ (ಐಐಎಂ) ಸಂಶೋಧನೆಗೆ ಬೇಕಿರುವ ಅನುದಾನ ನೀಡಲು ‘ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ’ಯನ್ನು (ಎಚ್‌ಇಎಫ್‌ಎ) ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ .
  • As per the funding mechanism, an institution can claim 10 times the sum it escrows in the first year. “If an institution escrows ₹10 crore, it can get approval for a ₹100-crore project.
  • ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬೇಕಿರುವ ಅನುದಾನ ನೀಡಲು ‘ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ’  (HEFA)   ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ.
  • As per the funding mechanism, an institution can claim 10 times the sum it escrows in the first year. “If an institution escrows 10 crore, it can get approval for a 100-crore project.

 

BACK2BASICS

ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (HEFA),ಬಗ್ಗೆ 

  • ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸುವ ಈ ಸಂಸ್ಥೆಯು, ಆ ಹಣ ಮತ್ತು ದೇಣಿಗೆಗಳಿಂದ ಸಂಗ್ರಹವಾದ ಹಣವನ್ನು ಉನ್ನತ ಶಿಕ್ಷಣ ಸಂಸ್ಥೆಗಳಾದ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ( NIT) ಹಾಗೂ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳಲ್ಲಿ (IIM) ಸಂಶೋಧನೆಗೆ ಬೇಕಿರುವ ಅನುದಾನ ನೀಡಲು,ಶಿಕ್ಷಣ ಗುಣಮಟ್ಟ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ವಿನಿಯೋಗಿಸಲಿದೆ. ಇದು ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಂತೆ ಕಾರ್ಯನಿರ್ವಹಿಸಲಿದೆ.
  • 2 ಸಾವಿರ ಕೋಟಿ ಬಂಡವಾಳದ ಎಚ್ಇಎಫ್ಎಯನ್ನು ಕೇಂದ್ರ ಸರ್ಕಾರವು ಎನ್ಬಿಎಫ್ಸಿ(NBFC) (ಬ್ಯಾಂಕೇತರ ಹಣಕಾಸು ಸಂಸ್ಥೆ) ಅಥವಾ ಸರ್ಕಾರಿ ಬ್ಯಾಂಕ್ಜೊತೆ ಸೇರಿ ಆರಂಭಿಸಿದೆ . ಇದರಲ್ಲಿ ಕೇಂದ್ರದ ಪಾಲು  1 ಸಾವಿರ ಕೋಟಿ ಆಗಿರಲಿದೆ.  
  • ಎಚ್‌ಇಎಫ್‌ಎಯ ಬಂಡವಾಳವನ್ನು 20 ಸಾವಿರ ಕೋಟಿವರೆಗೆ ಹೆಚ್ಚಿಸಲು ಅವಕಾಶ ಇದೆ. ಈ ಹಣ ಬಳಸಿ ಐಐಟಿ, ಐಐಎಂ, ಎನ್‌ಐಟಿಗಳಲ್ಲಿ ವಿಶ್ವದರ್ಜೆಯ ಪ್ರಯೋಗಾಲಯಗಳು ಹಾಗೂ ಮೂಲಸೌಕರ್ಯ ನಿರ್ಮಿಸಲು ನೆರವು ನೀಡಲಾಗುವುದು ಎಂದು ಎಂದುಕೇಂದ್ರ  ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ .
  • ಸರ್ಕಾರಿ ಹಾಗೂ ಖಾಸಗಿ ಉದ್ದಿಮೆಗಳು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುವ ಹಣವನ್ನೂ ಈ ಕಾರ್ಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

 ಯಾವ ರೀತಿ ಕಾರ್ಯನಿರ್ವಹಿಸಲಿದೆ ?

  • ಪ್ರಯೋಗಾಲಯಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಹಣವನ್ನು HEFA 10 ವರ್ಷ ಅವಧಿಯ ಸಾಲದ ರೂಪದಲ್ಲಿ ನೀಡಲಿದೆ. ಸಾಲದ ಅಸಲನ್ನು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕ, ಸಂಶೋಧನೆಯಿಂದ ಬರುವ ವರಮಾನ ಬಳಸಿ ಪಾವತಿಸಬೇಕು. ಬಡ್ಡಿಯ ಮೊತ್ತವನ್ನು ಸರ್ಕಾರ ಪಾವತಿಸಲಿದೆ.
  • ಕೇಂದ್ರದಿಂದ ಅನುದಾನ ಪಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳು HEFA ಸದಸ್ಯತ್ವ ಪಡೆಯಬಹುದು.ಶಿಕ್ಷಣ ಬಾಂಡ್‌ಗಳ ಮಾರಾಟದ ಮೂಲಕ ಎಚ್‌ಇಎಫ್‌ಎ ಹಣ ಸಂಗ್ರಹಿಸಲಿದೆ
  • ‘ಶಿಕ್ಷಣ ಸಂಸ್ಥೆಗಳು ಯೋಜನೆಯೊಂದನ್ನು ನಿಗದಿತ ಅವಧಿಗೆ ಮುನ್ನವೇ ಪೂರ್ಣಗೊಳಿಸಿದರೆ ಬೋನಸ್ ನೀಡುವ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ದಂಡ ವಿಧಿಸುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ನಡೆದಿದೆ’ . ಎಚ್‌ಇಎಫ್‌ಎ ಸ್ಥಾಪನೆಯಿಂದ ಶಿಕ್ಷಣ ಸಂಸ್ಥೆಗಳಿಗೆ ನೀಡುವ ವಾರ್ಷಿಕ ಅನುದಾನ ಕಡಿಮೆ ಆಗದು

ಅಭ್ಯರ್ಥಿಗಳ ಯೋಚನೆಗೆ ಒಂದು ಯೋಜನೆ (THINKING PROJECT TO ASPIRANT)

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳೆ ಯಾಕೆ ಇದರಡಿಯಲ್ಲಿ ಬರುತ್ತದೆ …? ಹಾಗು ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಸ೦ಸ್ಥೆಯಿಂದ ಹೊರ ಬರುವ ವಿದ್ಯಾರ್ಥಿಗಳು ಕೂಡ ಮಾರುಕಟ್ಟೆಯ ಬೇಡಿಕೆಯಲ್ಲಿರುವ ತಂತ್ರಜ್ಞಾನ ಬಗ್ಗೆ  ಪೂರ್ಣ ಜ್ಞಾನದ ಕೊರತೆ ಇರುವುದು ಕಾಣುತ್ತದೆ .ಸರ್ಕಾರದ ಯೋಜನೆಯಿಂದ  ಅದನ್ನು ಹೋಗಲಾಡಿಸಲು ಸಾಧ್ಯವೇ??.. ಯೋಚಿಸಿ.

http://www.thehindu.com/news/national/hrd-ministry-invites-project-proposals-for-hefa-funding/article19525079.ece

2.ಸಾಂಸ್ಥಿಕ ಆಡಳಿತದ  ಕಡೆ ಸೆಬಿಯ(SEBI) ಗಮನ

ವಿದ್ಯಾರ್ಥಿಗಳ ಗಮನಕ್ಕೆ

Mains Paper 3: Economy | Inclusive growth and issues arising from it.

 Prelims level (ಪ್ರಿಲಿಮ್ಸ್ ಗಾಗಿ ): ಸಾಂಸ್ಥಿಕ ಆಡಳಿತ ಎಂದರೇನು ?

Mains level (ಮೇನ್ಸ್ ಗಾಗಿ):  ಇದು ಒಂದು ಪ್ರಮುಖ ವಿಷಯವಾಗಿದೆ ಏಕೆಂದರೆ ಸೆಬಿಯು ಅದರ ಮೇಲೆ ಸಮಿತಿಯನ್ನು ರಚಿಸಿದೆ.

ಪ್ರಮುಖ ಅಂಶಗಳು

  • ಇನ್ಫೋಸಿಸ್ನಿಂದ ವಿಶಾಲ್ ಸಿಕ್ಕಾ ಅವರ ಇತ್ತೀಚಿನ ನಿರ್ಗಮನದ ಕಾರಣ ಸಾಂಸ್ಥಿಕ ಆಡಳಿತ’ ಚರ್ಚೆಯ ವಿಷಯವಾಗಿದೆ ಹೂಡಿಕೆದಾರರು, ಮುಖ್ಯವಾಗಿ the retail segment, ಆಸಕ್ತಿಯನ್ನು ರಕ್ಷಿಸಲು ಸೆಬಿಯು ಅಂತಹ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಿಕೊಳ್ಳಬೇಕು ಎಂದು  ಹಲವು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
  • SEBI ಈ ವರ್ಷದ ಜೂನ್ ನಲ್ಲಿ ಉದಯ ಕೊಟಾಕ್ ರವರ  ಅಧ್ಯಕ್ಷತೆಯಲ್ಲಿ ಕಾರ್ಪೊರೇಟ್ ಆಡಳಿತದ ಬಗ್ಗೆ ಅಧ್ಯಯನ ಮಾಡಲು  ಸಮಿತಿ  ರಚಿಸಿತ್ತು. ಈ ಸಮಿತಿಯು ತನ್ನ್ನ  ವರದಿಯನ್ನು ನಾಲ್ಕು ತಿಂಗಳೊಳಗೆ ಸಲ್ಲಿಸುವ ನಿರೀಕ್ಷೆಯಿದೆ.

BACK2BASICS

 

ಸಾಂಸ್ಥಿಕ ಆಡಳಿತ ಎಂದರೇನು ? (Corporate governance)

  • ಸಾಂಸ್ಥಿಕ ಅಡಳಿತ ಎಂಬುದು ಪ್ರಕ್ರಿಯೆಗಳು, ಪದ್ಧತಿಗಳು, ಕಾರ್ಯನೀತಿಗಳು, ಕಾನೂನುಗಳು, ಮತ್ತು ಸ್ಥಾಪಿತ ಪದ್ಧತಿಗಳ ಒಂದು ಸಂಕಲನವಾಗಿದೆ. ಒಂದು ಸಂಸ್ಥೆ ಅಥವಾ ಕಂಪನಿಯು ನಿರ್ದೇಶಿಸಲ್ಪಡುವ, ಆಡಳಿತಕ್ಕೆ ಒಳಗಾಗುವ ಅಥವಾ ನಿಯಂತ್ರಣಕ್ಕೆ ಒಳಪಡುವ ಮಾರ್ಗದ ಮೇಲೆ ಇದು ಪ್ರಭಾವ ಬೀರುತ್ತದೆ.
  • ಸಂಸ್ಥೆಯೊಂದರಲ್ಲಿ ತೊಡಗಿಸಿಕೊಂಡಿರುವ ಅನೇಕ ಮಧ್ಯಸ್ಥಗಾರರ ನಡುವಿನ ಸಂಬಂಧಗಳನ್ನು ಹಾಗೂ ಯಾವ ಗುರಿ ಅಥವಾ ಉದ್ದೇಶದ ಸಾಧನೆಗಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆಯೋ ಅವುಗಳನ್ನೂ ಸಹ ಸಾಂಸ್ಥಿಕ ಅಡಳಿತವು ಒಳಗೊಳ್ಳುತ್ತದೆ.
  • ಷೇರುದಾರರು/ಸದಸ್ಯರು, ಆಡಳಿತ ಮಂಡಳಿ, ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರು ಪ್ರಧಾನ ಮಧ್ಯಸ್ಥಗಾರರಾಗಿರುತ್ತಾರೆ. ಇತರ ಮಧ್ಯಸ್ಥಗಾರರಲ್ಲಿ, ಕಾರ್ಮಿಕರು (ನೌಕರರು), ಗ್ರಾಹಕರು, ಸಾಲದಾತರು (ಉದಾ: ಬ್ಯಾಂಕುಗಳು, ಬಾಂಡ್‌ ಅಥವಾ ಕರಾರುಪತ್ರವನ್ನು ಹೊಂದಿದವರು), ಸರಬರಾಜುದಾರರು, ನಿಯಂತ್ರಕರು ಮತ್ತು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುತ್ತಾರೆ.

ಸಾಂಸ್ಥಿಕ ಅಡಳಿತದ ಮೂಲತತ್ವಗಳು

  • ಷೇರುದಾರರ ಹಕ್ಕುಗಳು ಮತ್ತು ಅವರೊಂದಿಗಿನ ನಿಷ್ಪಕ್ಷಪಾತವಾದ ವರ್ತನೆ :

ಷೇರುದಾರರ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ, ಅವುಗಳನ್ನು ಪರಿಪಾಲಿಸುವಲ್ಲಿ ಅಥವಾ ಚಲಾವಣೆಗೆ ತರುವಲ್ಲಿ ಸಂಘಟನೆಗಳು ಷೇರುದಾರರಿಗೆ ನೆರವಾಗಬೇಕು. ಷೇರುದಾರರಿಗೆ ಅರ್ಥವಾಗುವ ರೀತಿಯಲ್ಲಿರುವ ಮತ್ತು ಸುಲಭವಾಗಿ ಲಭ್ಯವಿರುವ ಪರಿಣಾಮಕಾರಿಯಾದ ಮಾಹಿತಿಯನ್ನು ನೀಡುವ ಮೂಲಕ ಸಂಘಟನೆಗಳು ಷೇರುದಾರರಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿ ನೆರವಾಗಬಹುದು. ಸಂಘಟನೆಯ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳುವಂತೆ ಷೇರುದಾರರನ್ನು ಪ್ರೋತ್ಸಾಹಿಸುವುದೂ ಸಹ ಇದರಲ್ಲಿ ಸೇರಿದೆ.

  • ಇತರ ಮಧ್ಯಸ್ಥಗಾರರ ಹಿತಾಸಕ್ತಿಗಳು :

ಎಲ್ಲಾ ಕ್ರಮಬದ್ಧ ಮಧ್ಯಸ್ಥಗಾರರಿಗೆ ಸಂಬಂಧಿಸಿದಂತೆ, ಶಾಸನಬದ್ಧವಾಗಿರುವ ಹಾಗೂ ಇತರ ಕಟ್ಟುಪಾಡುಗಳನ್ನು ತಾವು ಹೊಂದಿರುವುದರ ಕುರಿತು ಸಂಘಟನೆಗಳು ಗುರುತಿಸಿಕೊಳ್ಳಬೇಕು.

  • ಮಂಡಳಿಯ ಪಾತ್ರ ಮತ್ತು ಜವಾಬ್ದಾರಿಗಳು :

ಅನೇಕ ವ್ಯಾವಹಾರಿಕ ಚರ್ಚಾವಿಷಯಗಳ ಕುರಿತು ಕಾರ್ಯನಿರ್ವಹಿಸಲು ಅನುವಾಗುವಂಥ ಕೌಶಲಗಳು ಮತ್ತು ವಿವೇಚನೆಗಳ ಒಂದು ಸರಣಿಯ ಅಗತ್ಯ ಮಂಡಳಿಗಿರುತ್ತದೆ. ಆಡಳಿತ ಮಂಡಳಿಯ ಕಾರ್ಯವಿಧಾನವನ್ನು ಅವಲೋಕಿಸುವ ಮತ್ತು ಅದಕ್ಕೆ ಸವಾಲೆಸೆಯುವ ಸಾಮರ್ಥ್ಯವನ್ನೂ ಅದು ಹೊಂದಿರಬೇಕಾಗುತ್ತದೆ.

  • ಸಮಗ್ರತೆ ಮತ್ತು ನೈತಿಕ ನಡತೆ :

ನೈತಿಕವಾದ ಮತ್ತು ಜವಾಬ್ದಾರಿಯುತವಾದ ನಿರ್ಧಾರಗಳನ್ನು ಮಾಡುವುದು ಕೇವಲ ಸಾರ್ವಜನಿಕ ಸಂಪರ್ಕಗಳಿಗಾಗಿ ಮಾತ್ರವೇ ಮುಖ್ಯವಲ್ಲ; ಅಪಾಯ ನಿರ್ವಹಣೆ ಮತ್ತು ಕಾನೂನುದಾವೆಗಳನ್ನು ತಪ್ಪಿಸುವಲ್ಲಿಯೂ ಸಹ ಇದೊಂದು ಅತ್ಯಗತ್ಯ ಅಂಶವಾಗಿರುತ್ತದೆ. ತಮ್ಮ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕರಿಗಾಗಿ ಸಂಘಟನೆಗಳು ಒಂದು ನೀತಿಸಂಹಿತೆಯನ್ನು ರೂಪಿಸಬೇಕಾಗುತ್ತದೆ. ಇದು ನೈತಿಕ ಹಾಗೂ ಜವಾಬ್ದಾರಿಯುತ ನಿರ್ಧಾರಗಳನ್ನು ತಳೆಯುವಲ್ಲಿ ನೆರವಾಗುತ್ತದೆ.  

http://www.thehindu.com/todays-paper/tp-business/corporate-governance-focus-on-sebi/article19531217.ece

 

3.ಘಂತಾಸಲಾದಲ್ಲಿ 70 ಅಡಿ ಎತ್ತರದ ಬುದ್ಧನ ಪ್ರತಿಮೆ

ವಿದ್ಯಾರ್ಥಿಗಳ ಗಮನಕ್ಕೆ

TOPIC -Indian culture will cover the salient aspects of Art Forms, Literature and Architecture from ancient to modern times.

ಪ್ರಿಲಿಮ್ಸ್ ಗಾಗಿ – ಬುದ್ಧನ ಪ್ರತಿಮೆ ನಿರ್ಮಿಸಿರುವ ಸ್ಥಳದ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಘಂತಾಸಲಾದಲ್ಲಿ ನಿರ್ಮಿಸಿರುವ ಬುದ್ಧನ ಪ್ರತಿಮೆ ಯು ಬೇರೆ ಸ್ಥಳ ಗಳಲ್ಲಿರುವ ಪ್ರತಿಮೆಯುಲ್ಲಿ ಬೌದ್ಧಧರ್ಮದ ಆಧಾರದಮೇಲೆ ವ್ಯತ್ಯಾಸಿಸಿ.

ಪ್ರಮುಖ ಸುದ್ದಿ:

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಘಂತಾಸಾಲಾ ಎಂಬ ಗ್ರಾಮವು  ಪ್ರಮುಖ ಬೌದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು.ಅಲ್ಲಿ ಬುದ್ಧನ 70- ಅಡಿ ಪ್ರತಿಮೆಯನ್ನು ನಿರ್ಮಾಣಮಾಡಲು  ಸುಮಾರು 1.5-ಕೋಟಿ ವೆಚ್ಚ ಮಾಡಲಾಗಿದೆ.

ಮುಖ್ಯಾ೦ಶಗಳು

  • ಮಹಾಪರಿನಿರ್ವಾಣ:

ಬುದ್ಧನ ಪ್ರತಿಮೆಯು ಬೌದ್ಧ ವಾಸ್ತುಶೈಲಿಯಲ್ಲಿ ಎರಡು ಅಂತಸ್ತಿನಲ್ಲಿ  ರಚನಯಾಗಿದದ್ದು  100 ಅಡಿ ಅಗಲ ಮತ್ತು 70 ಅಡಿ ಎತ್ತರ  ಹೊಂದಿರುವ ಈ ಪ್ರತಿಮೆಯು ಮಹಾಪರಿನಿರ್ವಾಣ ಭಂಗಿಯನ್ನು ಹೊಂದಿರುವುದೆ ಒಂದು ಪ್ರಮುಖಾಂಶವಾಗಿದೆ.

  • ಬುದ್ಧನ ಮಹಾಪರಿನಿರ್ವಾಣದಲ್ಲಿ ಒಂದು ಹೊಸ ವಿಷಯದ. ಬೌದ್ಧ ಧರ್ಮದಲ್ಲಿ, ಮಹಾಪರಿನಿರ್ವಾಣ ಎಂದರೆ ಅಂತಿಮ ಸ್ಥಾನ(ultimate state)   – ಶಾಶ್ವತವಾದ, ಅತ್ಯುನ್ನತ ಶಾಂತಿ ಮತ್ತು ಸಂತೋಷ – ಇದು  ಬುದ್ಧನ  ಮೂಲಕ ಪ್ರವೇಶಿಸಲ್ಪಟ್ಟಿದೆ.

 

  • ಒರಗಿಕೊಳ್ಳುವ ಬುದ್ಧನ ಮಹತ್ವ:

ಎರಡು ಅಂತಸ್ತಿನ ರಚನೆಯ ಮೇಲೆ  ಬುದ್ಧನ ಒರಗಿಕೊಳ್ಳುವ ಭವ್ಯವಾದ ಪ್ರತಿಮೆಯನ್ನು ಕಾಣಬಹುದು.  ಇದು ಬೌದ್ಧಧರ್ಮದ ಪ್ರಮುಖ ಪ್ರತಿಮಾಶಾಸ್ತ್ರ ಮತ್ತು ಶಾಸನ ಮಾದರಿ.

  • ಇದು ಬುದ್ಧನ  ಜೀವನದ ಕೊನೆಯದಲ್ಲಿ  ಅನಾರೋಗ್ಯದ ಸಮಯವನ್ನು ಹಾಗು  ಮಹಾಪರಿನಿರ್ವಾಣಕ್ಕೆ ಪ್ರವೇಶಿಸುವ ಬಗ್ಗೆ ಸೂಚಿಸುತ್ತದೆ. ಇದು ಬುದ್ಧನು ಬಲ ಪಾರ್ಶ್ವದಲ್ಲಿ (right flank) ಶಮನ   ವಾಗಿರುವುದನ್ನು  ಅವನ ತಲೆಯು   ಬಲ ಮೊಣಕೈಯಲ್ಲಿ ವಿಶ್ರಮಿಸುತ್ತಿರುವುದು, ಅವನ ಕೈಯಿಂದ ಅವನ ತಲೆಯನ್ನು ಬೆಂಬಲಿಸುತ್ತಿರುವುದನ್ನು  ತೋರಿಸುತ್ತದೆ,. ಈ ಮಾದರಿಯು ಗಾಂಧಾರದ ಗ್ರೀಕ್-ಬೌದ್ಧ ಕಲೆಗಳಲ್ಲಿನ ಬುದ್ಧನ ಇತರ ಚಿತ್ರಣಗಳನ್ನು ಅದೇ ಸಮಯದಲ್ಲಿ ಹೊರಹೊಮ್ಮಿದೆ ಎಂದು ತೋರುತ್ತದೆ.

ಘಂತಾಸಲಾ ಬಗ್ಗೆ:

  • ಪ್ರಾಚೀನ ಕಾಲದಲ್ಲಿ ಕಟಕಾಸಿಲ ಎಂದು ಕರೆಯಲ್ಪಡುವ ಘಂಟಾಸಲ ಕರಾವಳಿಯ ಬಳಿ ಇರುವ ಪ್ರಸಿದ್ಧ ಬೌದ್ಧ ಕೇಂದ್ರವಾಗಿದೆ. ಗ್ರೀಕ್ ಭೂಗೋಳಶಾಸ್ತ್ರಜ್ಞನಾದ ಟೋಲೆಮಿ, ಮಿಸೊಲಿಯಾ (ಪ್ರಸ್ತುತ ಮಚಿಲಿಪಟ್ನಮ್) ಪ್ರದೇಶದಲ್ಲಿ ಕೊಂಟಾಕೋಸಿಸ್ಲಾ ಎಂಬ ಒಂದು ನಿರ್ದಿಷ್ಟ ಎಂಪೋರಿಯಮ್ ಉಲ್ಲೇಖವನ್ನು ಮಾಡಿದ್ದಾನೆ.
  • ಆರಂಭದಲ್ಲಿ, ಘಂತಾಸಲಾದ ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯನ್ನು ಬೋಸ್ವೆಲ್ 1870-71ರಲ್ಲಿ ವರದಿ ಮಾಡಿದರು. ನಂತರದಲ್ಲಿಈ ಸ್ಥಳದಲ್ಲಿ   ಸ್ತೂಪ ವಾಸ್ತುಶೈಲಿಯನ್ನು ವಿವರವಾಗಿ ಹೊರತಂದವರಾರು  ಅಲೆಕ್ಸಾಂಡರ್ ರಿಯಾರಿಂದ

http://www.thehindu.com/todays-paper/tp-national/tp-andhrapradesh/ghantasala-to-get-70-ft-buddha-statue/article19531313.ece

 

4.ಭಾರತ- ಸ್ವೀಡನ್ ಬೌದ್ದಿಕ ಆಸ್ತಿ ಒಪ್ಪoದಕ್ಕೆ ಅಸ್ತು.

ವಿದ್ಯಾರ್ಥಿಗಳ ಗಮನಕ್ಕೆ

Mains Paper 2: IR | India and its neighborhood- relations.

ಯುಪಿಎಸ್ಸಿ ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು  ಮುಖ್ಯ:

ಪ್ರಿಲಿಮ್ಸ್ಗಾಗಿ (Prelims level): Not much 

ಮೇನ್ಸ್ ಗಾಗಿ( Mains level): ಭಾರತ ಮತ್ತು ಸ್ವೀಡನ್ ಸಂಬಂಧ ಹಾಗು ನೆರೆಯ ಬೇರೆ ಯಾವ ಯಾವ ದೇಶಗಳ   ಜೊತೆ ಬೌದ್ದಿಕ ಆಸ್ತಿ ಒಪ್ಪoದ ಮಾಡಿಕೊಂಡಿದೆ

ಪ್ರಮುಖ ಸುದ್ದಿ:

  • ಬೌದ್ದಿಕ ಆಸ್ತಿ( intellictual property rights (IPRs))  ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸ್ವೀಡನ್ ನಡುವೆ ಏರ್ಪಟ್ಟಿದ್ದ   ಒಪ್ಪoದದ ತಿಳಿವಳಿಕೆ ಪತ್ರಕ್ಕೆ ಕೇಂದ್ರ ಕ್ಯಾಬಿನೆಟ್   ಅನುಮೋದನೆ ನೀಡಿದೆ.
  • ಉಭಯ ದೇಶಗಳು IPRಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಬೌದ್ದಿಕ ಆಸ್ತಿ ಹಕ್ಕುಗಳನ್ನು ಪರಿಣಾಮಕಾರಿಯಾಗಿಸಲು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಎರಡು ದೇಶಗಳು ತಾಂತ್ರಿಕ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು.ವಿಸ್ತಾರವಾದ ಕಾರ್ಯವಿಧಾನ ರೂಪಿಸುವದನ್ನು ಈ ಒಪ್ಪoದ ಒಳಗೊಂಡಿದೆ.

ಒಪ್ಪಂದದ ಮಹತ್ವವೇನು…??

  • ಅನುಭವ ಮತ್ತು ಬೌದ್ದಿಕ ಆಸ್ತಿಯ ಪರಿಸರ ವೇವಸ್ಥೆಯಲ್ಲಿ ಅನುಭವಗಳ ವಿನಿಮಯ ಕಾರ್ಯ ಸಕ್ರಿಯಗೊಳಿಸುವುದು  ಎರಡು ದೇಶಗಳ ಉದ್ಯಮಿಗಳು.ಹೂಡಿಕೆದಾರರು ಮತ್ತು ವ್ಯವಹಾರಗಳಗೆ ಲಾಭದಾಯಕ.
  • ಎರಡು ದೇಶಗಳ ನಡುವಿನ ಉತ್ತಮ ಪದ್ದತಿಗಳ ವಿನಿಮಯವು ಭಾರತದ ಜನರ ಬೌದ್ದಿಕ ಸೃಷ್ಟಿಗಳ ಬಗ್ಗೆ ಸುದಾರಣೆ,ರಕ್ಷಣಾ ಮತ್ತು ಜಾಗೃತಿಗೆ ದಾರಿ ಮಾಡಿಕೊಟ್ಟಿದೆ.
  • ಪೇಟೆಂಟ್ಗಳು,ಟ್ರೇಡ್ಮಾರ್ಕ್ಗಳು ಕೈಗಾರಿಕಾ ವಿನ್ಯಾಸಗಳು .ಹಕ್ಕುಸ್ವಾಮ್ಯ ಮತ್ತು ಬೌದ್ದಿಕ ಬೌಗೋಳಿಕ ಸೂಚನೆಗಳು .ರಕ್ಷಣೆ ,ಜಾರಿಗೊಳಿಸುವಿಕೆ ಮತ್ತು ಬೌದ್ದಿಕ ಆಸ್ತಿ  ಹಕ್ಕುಗಳ ಬಳಕೆ ಮಾಹಿತಿ.
  • ವಿಶ್ಯವಿದ್ಯಾಲಯಗಳು ಸಣ್ಣ ಮತ್ತು ಮಾಧ್ಯಮ ಉದ್ಯಮಗಳಿಂದ ಕಾರ್ಯಕ್ರಮಗಳ ಆಯೋಜನೆ ಮತ್ತು ಭಾಗವಹಿಸುವುದರ ಮೂಲಕ ಉತ್ತಮ ಆಚರಣೆಗಳನ್ನು ಜಂಟಿಯಾಗಿ ಏರ್ಪಡಿಸುವ ಮೂಲಕ ಬಾಂಧವ್ಯ ವೃದ್ಧಿ.

5.ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಟೊಲ್ಲಿಂಗ್ಗಾಗಿ  ಮೊಬೈಲ್  ಆಪ್

ವಿದ್ಯಾರ್ಥಿಗಳ ಗಮನಕ್ಕೆ

Topic: Important aspects of governance, transparency and accountability, e-governance- applications, models, successes, limitations, and potential; citizens charters, transparency & accountability and institutional and other measures.

 ಯುಪಿಎಸ್ಸಿ ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು  ಮುಖ್ಯ:

ಪ್ರಿಲಿಮ್ಸ್ಗಾಗಿ (Prelims level): FASTag ಎಂದರೇನು ?   

ಮೇನ್ಸ್ ಗಾಗಿ( Mains level): ಈ ತಂತ್ರಜ್ಞಾನದ ಅನುಕೂಲತೆ ಮತ್ತು ಅನಾನುಕೂಲತೆಗಳೇನು ?? ಇದರಿಂದ ಉದ್ಯೋಗದ ಮೇಲಾಗುವ ಪರಿಣಾಮಗಳು.. ??

ಪ್ರಮುಖ ಸುದ್ದಿ:

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎರಡು ಮೊಬೈಲ್ ಅಪ್ಲಿಕೇಶನ್ಗಳಾದ MyFASTag and FASTag Partnerಗಳ್ಳನ್ನು ಪಾಲುದಾರರೊಂದಿಗೆ ಹೊರಬಂದಿದೆ. ಇದು ಎಲೆಕ್ಟ್ರಾನಿಕ್ ಟೋಲ್ ಪಾವತಿಗೆ ಉತ್ತೇಜಿಸುವ ಪ್ರಯತ್ನವಾಗಿದೆ
  • MyFASTag ನ್ನು Android and iOS app storesನಿಂದ ಡೌನ್ಲೋಡ್ ಮಾಡಬಹುದಾದ ಗ್ರಾಹಕರ ಆಪ್.ಗ್ರಾಹಕರು ಈ ಅಪ್ಲಿಕೇಶನ್ನಲ್ಲಿ FASTag ಳನ್ನು ಖರೀದಿಸಬಹುದು ಅಥವಾ ಮರುಚಾರ್ಜ್ ಮಾಡಬಹುದು, ಇದು  ಗ್ರಾಹಕರು ಟೋಲ್ ಗಳಲ್ಲಿ ಪಾವತಿಸಿದ ಹಣದ  ವಹಿವಾಟಿನ  ಬಗ್ಗೆ ಸಂಗ್ರಹಿಸುತ್ತದೆ  ಮತ್ತು ಆನ್ಲೈನ್ ಕುಂದುಕೊರತೆ ಪರಿಹಾರವನ್ನು ಒದಗಿಸುತ್ತದೆ.

FASTag ಎಂದರೇನು ?

  • ಇದು ರೇಡಿಯೋ ತರಂಗಗಳನ್ನು ಪತ್ತೆ ಹಚ್ಚುವ (Radio Frequency Identification (RFID) ) ತಂತ್ರಜ್ಞಾನವಾಗಿದ್ದು ಇದರಿಂದ  ನೇರವಾಗಿ ಟೋಲ್ ಗಳಲ್ಲಿ ತಮ್ಮ ಖಾತೆಯಿಂದ  ಹಣ  ಪಾವತಿಸುವ ಅನುಕೂಲತೆ ಒದಗಿಸುತ್ತದೆ .
  • ಇದು ವಾಹನದ ಕಿಟಕಿಯ ಪರದೆ ಮೇಲೆ  ಅಳವಡಿಸಲಾಗುತ್ತದೆ  ಮತ್ತು  ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿಸಲು ಕಾಯದೆ ಸಂಚರಿಸಬಹುದು.
  • ಈ ಟ್ಯಾಗ್ 5 ವರ್ಷಗಳ ಮಾನ್ಯತೆಯನ್ನು ಹೊಂದಿದ್ದು ಮತ್ತು ನಂತರ  ರಿಚಾರ್ಜ್ ಮಾಡಿಸಿದರೆ ಸಾಕು. ಈ  ಸೇವೆ ಎಲ್ಲಾ ರೀತಿಯ ವಾಹನಗಳಿಗೆ ಅನ್ವಯಿಸುತ್ತದೆ ಮತ್ತು ಪ್ರಸ್ತುತ ಆದರೆ ಸೇವೆಯ ಬಳಕೆಯನ್ನು   ಸ್ವಯಂಪ್ರೇರಿತವಾಗಿದೆ.

 

ONLY FOR PRELIMS

1.ಪ್ರಪಂಚದಲ್ಲೇ  ಅತಿ  ಚಿಕ್ಕ ಶಸ್ತ್ರಚಿಕಿತ್ಸಾ ರೋಬೋಟ್ 

  • ಯುಕೆವಿಜ್ಞಾನಿಗಳು ಮೊಬೈಲ್ ಫೋನ್ ಮತ್ತು ಬಾಹ್ಯಾಕಾಶ ಕೈಗಾರಿಕೆಗಳಲ್ಲಿ ಬಳಸಲಾಗುವ ಕಡಿಮೆ-ವೆಚ್ಚದ ತಂತ್ರಜ್ಞಾನದೊಂದಿಗೆ ಪ್ರಪಂಚದ ಅತ್ಯಂತ ಚಿಕ್ಕ ಶಸ್ತ್ರಚಿಕಿತ್ಸಾ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ರೋಬಾಟ್ ಅನ್ನು ವರ್ಸಿಯಸ್ ಎಂದು ಕರೆಯಲಾಗಿದೆ .

  2.ಭಾರತಕ್ಕೆ ರಷ್ಯಾ ನೂತನ ರಾಯಭಾರಿ ಕುದಾಶೇವ್.

  • ಭಾರತಕ್ಕೆ ರಷ್ಯಾ ನೂತನ ರಾಯಭಾರಿಯಾಗಿ ನಿಕೋಲಾಯ್ ಕುದಾಶೆೇವ್ ನೇಮಕಗೊoಡಿದ್ದಾರೆ . ಇವರು ಆಗ್ನೇಯ  ಏಷ್ಯಾ  ತಜ್ಞರಾಗಿದ್ದು ,ಪ್ರಸ್ತುತ ರಷ್ಯಾ  ವಿಧೇಶಾoಗ ಸಚಿವಾಲಯದ ಉಪಪ್ರಧಾನ ನಿದೇಶಕರಾಗಿದ್ದಾರೆ .

3.ಮೊದಲ ವಿಶ್ವಶಾಂತಿ ವಿಶ್ವವಿದ್ಯಾಲಯ ಪುಣೆಯಲ್ಲಿ

  • ಭಾರತದ ಮೊದಲ ವಿಶ್ವಶಾಂತಿ ವಿಶ್ವವಿದ್ಯಾಲಯ ಪುಣಿಯಲ್ಲಿ  ಅನಾವರಣಗೊಂಡಿದೆ. ವಿಶ್ವದಲ್ಲಿ ಶಾಂತಿ ಮತ್ತು ಸಾಮರಸ್ಯ ಸ್ಥಾಪಿಸಲು ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸಿದ್ದು ,ವಿಜ್ಞಾನ ,ಅದ್ಯಾತ್ಮ ಹೊಂದಾಣಿಕೆಯನ್ನು ಶಿಕ್ಷಣದ ಮೂಲಕ ನೀಡುವ ಉದ್ದೇಶ ಹೊಂದಿದೆ.

4.ಇಎಸ್ಐ ಗೆ ಭಾರತ ಸಹಿ..

  • ಗ್ಲೋಬಲ್ ಎನ್ವಿರಾನ್ಮೆಂಟಲ್ ಪೆಸಿಲಿಟಿ (GEF) ಅಡಿಯಲ್ಲಿ ವಿಶ್ವಬ್ಯಾಂಕ್ ನ ಕೋಟಿ ರೂ .ಮೊತ್ತದ ಪರಿಸರ  ವ್ಯವಸ್ಥೆಗಳ ಸೇವಾ ಸುದಾರಣೆ ಯೋಚನೆಗೆ ಭಾರತ ಸಮ್ಮತಿ ಸೂಚಿಸಿದೆ.
  • ಯೋಜನೆ ಅವದಿ 5 ವರ್ಷಗಳು ಆಗಿದ್ದು ವಿಶ್ವಬ್ಯಾಂಕ್ ಹಣದ ಪೂರ್ಣ ಜವಾಬ್ದಾರಿ ಹೊತ್ಹಿದೆ . ಯೋಚನೆಯು ಅರಂಭಿಕವಾಗಿ ಛತ್ಹಿಸ್ಗಡ ಮತ್ತು ಮದ್ಯಪ್ರದೇಶದಲ್ಲಿ ಜಾರಿಗೆತಂದಿದೆ.
  • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಮೂಲಕ ಹಸಿರು ಭಾರತ ರಾಷ್ಟೀಯ ಮಿಷನ್ ಅಡಿಯಲ್ಲಿ ಯೋಚನೆಯನ್ನು ಜಾರಿಗೊಳಿಸಿಲಿದೆ. ಅರಣ್ಯ, ಪರಿಸರ ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಇದರ ಉದ್ದೇಶವಾಗಿದೆ.

 

5.ಆನೆಗಳ ಗಣತಿ 2017: ಕರ್ನಾಟಕಕ್ಕೆ ಮೊದಲ ಸ್ಥಾನ

  • ದೇಶದಲ್ಲೇ ಆನೆಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲೇ ಹೆಚ್ಚು ಎಂದು ‘ಆನೆ ಗಣತಿ -2017’ ಹೇಳಿದೆ.
  • ನಾಗರಹೊಳೆ, ಬಂಡೀಪುರ, ಭದ್ರಾ ಅಭಯಾರಣ್ಯಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚು ಇದೆ ಎಂಬುದು ಗಣತಿಯಲ್ಲಿ ತಿಳಿದು ಬಂದಿದೆ. ಗಣತಿ ಪ್ರಕಾರ ರಾಜ್ಯದಲ್ಲಿ 6,049, ಅಸ್ಸಾಂನಲ್ಲಿ 5,719 ಆನೆಗಳಿವೆ. ಎಲ್ಲ ಅರಣ್ಯ ವಲಯಗಳಲ್ಲೂ ಆನೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಪತ್ತೆಯಾಗಿವೆ.
  • ಮೇಲಿಂದ ಮೇಲೆ ಹುಲಿಗಳ ಸಾವು, ದಕ್ಷಿಣ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುವುದು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿರುವುದರಿಂದ ವಿವಾದಗಳಿಗೆ ಕಾರಣವಾಗಿದ್ದರೂ ಕರ್ನಾಟಕ ಅರಣ್ಯ ಇಲಾಖೆಯ ಪ್ರಯತ್ನಗಳು ಶ್ಲಾಘನೀಯವಾಗಿವೆ.
  • ಆನೆಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿರುವುದರ ಜತೆಗೆ ಹುಲಿಗಳ ಸಂಖ್ಯೆಯಲ್ಲೂ ರಾಜ್ಯವೇ ಮೊದಲ ಸ್ಥಾನದಲ್ಲಿರುವುದು ಅರಣ್ಯ ಇಲಾಖೆಯ ಕಾರ್ಯವೈಖರಿಗೆ ನಿದರ್ಶನವಾಗಿದೆ. ರಾಜ್ಯದ ಎಲ್ಲ ಅರಣ್ಯಪ್ರದೇಶಗಳ ಸುತ್ತ ಮಾನವ ಮತ್ತು ಆನೆಗಳ ಸಂಘರ್ಷ ಮುಂದುವರಿಯುತ್ತಲೇ ಇವೆ.
Share